Essay On Park In Kannada

ಬಂಡೀಪುರ ರಾಷ್ಟ್ರೀಯ ಉದ್ಯಾನವನ

ಬಂಡೀಪುರದಲ್ಲಿ ಹುಲಿ

ನೆಲೆಗುಂಡ್ಲುಪೇಟೆ ತಾಲೂಕು, ಚಾಮರಾಜನಗರ ಜಿಲ್ಲೆ, ಕರ್ನಾಟಕ, ಭಾರತ
ಅತಿ ಹತ್ತಿರದ ನಗರಚಾರಮಾಜನಗರ, ಮೈಸೂರಿನಿಂದ ೫೦ ಕಿ.ಮೀ ದೂರ. 80 kilometers (50 mi)
ಸ್ಥಾಪಿತ೧೯೭೪
ಆಡಳಿತ ಮಂಡಳಿಕರ್ನಾಟಕ ರಾಜ್ಯ ಅರಣ್ಯ ಇಲಾಖೆ
www.bandipurnationalpark.in

ಬಂಡೀಪುರ ರಾಷ್ಟ್ರೀಯ ಉದ್ಯಾನವನಕರ್ನಾಟಕದ ಚಾಮರಾಜನಗರ ಜಿಲ್ಲೆಯಲ್ಲಿ ಇರುವ ಒಂದು ರಾಷ್ಟ್ರೀಯ ಉದ್ಯಾನವನ. ತಮಿಳುನಾಡಿನಮದುಮಲೈ ರಾಷ್ಟ್ರೀಯ ಉದ್ಯಾನವನ ಮತ್ತು ಕೇರಳದ ವಾಯ್ನಾಡ್ ವನ್ಯಜೀವಿ ಅಭಯಾರಣ್ಯ ಇದಕ್ಕೆ ಹೊಂದಿಕೊಂಡಿದೆ. ಪ್ರಾಜೆಕ್ಟ್ ಟೈಗರ್ ಕ್ರಿಯೆಗೆ ಈ ಅಭಯಾರಣ್ಯ ಸಂಬಂಧವನ್ನು ಹೊಂದಿದೆ. ಹುಲಿ, ಆನೆ, ಚಿರತೆ ಇತ್ಯಾದಿ ಪ್ರಾಣಿಗಳು ಇಲ್ಲಿ ವಾಸಿಸುತ್ತವೆ.

ಬಂಡೀಪುರ ರಾಷ್ಟ್ರೀಯ ಉದ್ಯಾನವು 1974 ರಲ್ಲಿ ಪ್ರಾಜೆಕ್ಟ್ ಟೈಗರ್ ಅಡಿಯಲ್ಲಿ ಹುಲಿಮೀಸಲು ಪ್ರದೇಶವಾಗಿ ಸ್ಥಾಪಿಸಲ್ಪಟ್ಟಿದೆ. ಇದು ಒಮ್ಮೆ ಮೈಸೂರು ಸಾಮ್ರಾಜ್ಯದ ಮಹಾರಾಜರಿಗೆ ಖಾಸಗಿ ಬೇಟೆಯಾಡಲು ಮೀಸಲಾಗಿತ್ತು, ಆದರೆ ಈಗ ಹುಲಿ ಸಂರಕ್ಷಣಾ ಪ್ರದೇಶವಾಗಿ ಮಾರ್ಪಾಡು ಮಾಡಲಾಗಿದೆ.[೧] ಬಂಡೀಪುರವು ತನ್ನ ವನ್ಯಜೀವಿಗಳಿಗೆ ಹೆಸರುವಾಸಿಯಾಗಿದೆ ಮತ್ತು ಅನೇಕ ವಿಧದ ಬಯೋಮ್ಗಳನ್ನು ಹೊಂದಿದೆ, ಆದರೆ ಒಣಪತನಶೀಲ ಅರಣ್ಯವು ಪ್ರಬಲವಾಗಿದೆ.

ಉದ್ಯಾನವು 874 ಚದರಕಿಲೋಮೀಟರ್ (337 ಚದರಮೈಲಿ) ಪ್ರದೇಶವನ್ನು ವ್ಯಾಪಿಸಿದೆ. ಇದು ಭಾರತದ ಅಳಿವಿನಂಚಿನಲ್ಲಿರುವ ವನ್ಯಜೀವಿಗಳ ಹಲವಾರು ಜಾತಿಗಳನ್ನು ರಕ್ಷಿಸುತ್ತದೆ. ಸಮೀಪದ ನಾಗರಹೊಳೆ ರಾಷ್ಟ್ರೀಯ ಉದ್ಯಾನ (643 ಕಿಮಿ.2 (248 ಚದರಮೈಲಿ)), ಮುದುಮಲೈ ರಾಷ್ಟ್ರೀಯ ಉದ್ಯಾನವನ (320 ಕಿಮಿ.2 (120 ಚದರಮೈಲಿ)) ಮತ್ತು ವಯನಾಡ್ವನ್ಯ ಜೀವಿ ಅಭಯಾರಣ್ಯ (344 ಕಿಮಿ.2 (133 ಚದರಮೈಲಿ)) ಜೊತೆಗೆ ನೀಲಗಿರಿ ಜೀವಗೋಳ ರಿಸರ್ವ್ ಒಟ್ಟು 2,183 ಕಿಮಿ.2 (843 ಚದರಮೈಲಿ) ದಕ್ಷಿಣ ಭಾರತದ ಅತಿ ದೊಡ್ಡ ಸಂರಕ್ಷಿತ ಪ್ರದೇಶವಾಗಿದೆ ಮತ್ತು ದಕ್ಷಿಣ ಏಷ್ಯಾದ ಕಾಡು ಆನೆಗಳ ದೊಡ್ಡ ವಾಸಸ್ಥಾನವಾಗಿದೆ.

ಬಂಡೀಪುರವು ಚಾಮರಾಜನಗರ ಜಿಲ್ಲೆಯ ಗುಂಡ್ಲು ಪೇಟೆ ತಾಲೂಕಿನಲ್ಲಿ ಇದೆ. ಮೈಸೂರು ನಗರದಿಂದ 80 ಕಿಲೋಮೀಟರ್ (ಮೈಲಿ) ದೂರದಲ್ಲಿ ಊಟಿಯ ಪ್ರಮುಖ ಪ್ರವಾಸಿ ತಾಣವಾಗಿದೆ.[೨]ಇದರ ಪರಿಣಾಮವಾಗಿ, ಬಂಡೀಪುರವು ಬಹಳಷ್ಟು ಪ್ರವಾಸಿ ಸಂಚಾರವನ್ನು ಹೊಂದಿದೆ ಮತ್ತು ಪ್ರತಿವರ್ಷ ವರದಿಯಂತೆ ವೇಗದ ವಾಹನಗಳಿಂದ ಅನೇಕ ವನ್ಯಜೀವಿಗಳ ಸಾವು ಸಂಭವಿಸುತ್ತದೆ. ವನ್ಯಜೀವಿಗಳ ಸಾವಿನ ಪ್ರಮಾಣವನ್ನು ಕಡಿಮೆಮಾಡಲು 9 ರಿಂದ 6 ರವರೆಗೆ ಮುಸ್ಸಂಜೆ, ಮುಂಜಾನೆಯಲ್ಲಿ ಸಂಚಾರಕ್ಕೆ ನಿಷೇಧವಿದೆ.

ಇತಿಹಾಸ[ಬದಲಾಯಿಸಿ]

ಮೈಸೂರು ಸಾಮ್ರಾಜ್ಯದ ಮಹಾರಾಜ 1931 ರಲ್ಲಿ 90 ಕಿ.ಮೀ.2 (35 ಚ.ಮೀ.) ನ ಅಭಯಾರಣ್ಯವನ್ನು ನಿರ್ಮಿಸಿ, ಅದನ್ನು ವೆನುಗೋಪಾಲಾ ವನ್ಯಜೀವಿ ಉದ್ಯಾನ ಎಂದು ಹೆಸರಿಸಿದರು. ಬಂಡಿಪುರ ಟೈಗರ್ರಿಸರ್ವ್ 1973 ರಲ್ಲಿ ಪ್ರಾಜೆಕ್ಟ್ ಟೈಗರ್ ಅಡಿಯಲ್ಲಿ ಸ್ಥಾಪಿಸಲ್ಪಟ್ಟಿತು, ಸುಮಾರು 800 ಕಿ.ಮೀ.2 (310 ಚ.ಮೀ.) ವೆನುಗೋಪಾಲಾ ವನ್ಯಜೀವಿ ಉದ್ಯಾನಕ್ಕೆ ಸೇರಿತು.[೩]

ಘರ್ಷಣೆಗಳು ಮತ್ತು ಬೆದರಿಕೆಗಳು[ಬದಲಾಯಿಸಿ]

ಸಾಂಪ್ರದಾಯಿಕವಾಗಿ ಶುಷ್ಕದಿಂದ ತೇವಾಂಶವುಳ್ಳ ವಲಯಗಳಿಗೆ ವಲಸೆ ಬರುವ ಆನೆಗಳು ಈಗ ಹೆಚ್ಚಾಗಿ ಮಾನವ ವಾಸಸ್ಥಾನಗಳೊಂದಿಗೆ ಸಂಪರ್ಕಕ್ಕೆ ಬರುತ್ತವೆ ಮತ್ತು ಸಾಕಣೆ ಕೇಂದ್ರಗಳು ಹೆಚ್ಚಾಗಿ ಹಾನಿಗೊಳಗಾಗುತ್ತವೆ. ಕಬ್ಬು ಬೆಳೆಗಳು ವಿಶೇಷವಾಗಿ ಅವರಿಗೆ ಆಕರ್ಷಕವಾಗಿವೆ.

ರಾಷ್ಟ್ರೀಯ ಹೆದ್ದಾರಿ (NH-67) & (NH-212) ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಮೂಲಕ ಹಾದು ಹೋಗುತ್ತದೆ. ಅರಣ್ಯರಸ್ತೆ ಇಲಾಖೆಯ ಅಧಿಕಾರಿಗಲು ಪ್ರಯಾಣಿಕರಿಗೆ ಮತ್ತು ಸಂಜೆ 6 ನಿಂದ ಬೆಳಗ್ಗೆ 6 ರ ವರೆಗೆ ವಾಹನಗಳ ಚಲನೆಗೆ ನಿರ್ಬಂಧಗಳನ್ನು ವಿಧಿಸುವುದರ ಹೊರತಾಗಿಯೂ, ವೇಗವಾದ ವಾಹನಗಳು ಅನೇಕ ಕಾಡು ಪ್ರಾಣಿಗಳನ್ನು ಕೊಂದಿದ್ದರಿಂದ ಈ ರಸ್ತೆ ಒಂದು ಪ್ರಮುಖ ಕಳವಳವನ್ನುಂಟು ಮಾಡಿದೆ.[೪] ಈ ರಾಷ್ಟ್ರೀಯ ಉದ್ಯಾನದಲ್ಲಿ ಪ್ರತ್ಯೇಕವಾಗಿ ಕಂಡುಬರುವ ಕಾಡು ಪ್ರಾಣಿಗಳ ಆವಾಸಸ್ಥಾನದ ಅಳಿವಿನ ಭಯವನ್ನು ಹೆಚ್ಚಿಸಿದೆ.

ಉಲ್ಲೇಖಗಳು[ಬದಲಾಯಿಸಿ]

  1. "Bandipur National park". Mysore.nic.in. 
  2. "Bandipur". mysore.ind.in. 
  3. "Jungle Lodges, Bandipur". Junglelodges.com. 
  4. Padmaparna Ghosh (2010-10-22). "Close encounters of the wild kind". Livemint. 

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

Gallery[ಬದಲಾಯಿಸಿ]

  • Himavad Gopalaswamy Betta temple

  • View from Himavad Gopalaswamy Betta

  • Pack of dholes eating a chital

  • Dholes trying to hunt a sambar stag

ಬಂಡೀಪುರ ಉದ್ಯಾನವನದಲ್ಲಿ ಹುಲಿ
Elephant Trying to Cross the NH 67

ಬನ್ನೇರುಘಟ್ಟ. ರಾಷ್ಟ್ರೀಯ ಉದ್ಯಾನವನಭಾರತ ದ ಕರ್ನಾಟಕದಲ್ಲಿರುವ ಬೆಂಗಳೂರಿನ ದಕ್ಷಿಣಭಾಗದಲ್ಲಿ ಸುಮಾರು 22 km ದೂರದಲ್ಲಿದೆ. ಬೆಂಗಳೂರಿನಿಂದ ಸುಮಾರು ಒಂದೂವರೆ ಗಂಟೆಗಳ ಪ್ರಯಾಣ ಮಾಡಬೇಕಾಗುತ್ತದೆ. ಝೂವಲಾಜಿಕಲ್ ರಿಸರ್ವ್‌ಗೆ ಅತ್ಯಂತ ಯೋಗ್ಯವಾದ ಅತ್ಯಂತ ಶ್ರೀಮಂತ ನೈಸರ್ಗಿಕ ಪ್ರದೇಶಗಳಲ್ಲೊಂದಾದ ಗುಡ್ಡಗಾಡು ಪ್ರದೇಶವಾಗಿದೆ. 25,000 acre (104.27 km²)ಗಳ ಝೂವಲಾಜಿಕಲ್ ಪಾರ್ಕ್ ಬೆಂಗಳೂರಿನ ಪ್ರವಾಸಿಗರ ಅತ್ಯಂತ ಆಕರ್ಷಣೀಯ ಸ್ಥಳವಾಗಿದೆ.

ದಿ ಝೂವಲಾಜಿಕಲ್ ರಿಸರ್ವ್[ಬದಲಾಯಿಸಿ]

ಬನ್ನೇರುಘಟ್ಟದ ಹುಲಿ ಮತ್ತು ಸಿಂಹಧಾಮವು ಇಂಡಿಯನ್ಬಿಳಿ ಹುಲಿಗಳನ್ನೊಳಗೊಂಡು ಇಂಡಿಯನ್ ಹುಲಿಗಳನ್ನು ,ಸಿಂಹಗಳನ್ನು ಮತ್ತು ಇತರೆ ಸಸ್ತನಿಗಳನ್ನು ಹೊಂದಿದೆ. ಸಫಾರಿಗಳು - ಹುಲಿ & ಸಿಂಹದ ಸಫಾರಿ ಮತ್ತು ಗ್ರ್ಯಾಂಡ್ ಸಫಾರಿ(ಸಸ್ಯಹಾರಿಗಳನ್ನೊಳಗೊಂಡಿದೆ) - KSTDC, ರಿಸರ್ವ್‌ಗೆ ಹಣದ ನೆರವು ನೀಡಲು, KSTDCಯು ಇದನ್ನು ನಿರ್ವಹಿಸುತ್ತದೆ. ಪಾರ್ಕ್‌ನ ಹುಲಿ ರಿಸರ್ವ್‍, ಇಂಡಿಯಾದ ಫಾರೆಸ್ಟ್ ಡಿಪಾರ್ಟ್‌ಮೆಂಟ್‌ನಿಂದ ಗುರುತಿಸಲ್ಪಟ್ಟಿದೆ.

ಪ್ರವಾಸದ ಮಾಹಿತಿ[ಬದಲಾಯಿಸಿ]

ಎತ್ತರ: ಸಮುದ್ರ ಮಟ್ಟದಿಂದ 1245 ರಿಂದ 1634 ಮೀಟರ್ ಎತ್ತರದಲ್ಲಿದೆ
ಸಂದರ್ಶನದ ಸಮಯ: 9AM ರಿಂದ 5PM
ರಜಾದಿನಗಳು: ಮಂಗಳವಾರಗಳಲ್ಲಿ ಮುಚ್ಚಲಾಗುತ್ತದೆ
ವೀಕ್ಷಣೆಗೆ ಉತ್ತಮ ಸಮಯ: ಸೆಪ್ಟೆಂಬರ್‌ನಿಂದ ಜನವರಿ
ಹೇಗೆ ತಲುಪುವುದು: ಮೆಜೆಸ್ಟಿಕ್‌ನಿಂದ 365 , ಮಾರ್ಕೆಟ್‌ನಿಂದ 366 , ಶಿವಾಜಿನಗರದಿಂದ 368 , ಬ್ರಿಗೇಡ್ ರಸ್ತೆಯಿಂದ G-4

ಮೃಗಾಲಯ[ಬದಲಾಯಿಸಿ]

ಮೃಗಾಲಯದಲ್ಲಿ ಒಂದು ಚಿಕ್ಕ ವಸ್ತು ಸಂಗ್ರಹಾಲಯವಿದೆ ಅದರಲ್ಲಿ ಪ್ರಾಣಿವಿಜ್ಞಾನಕ್ಕೆ ಸಂಬಂಧಿಸಿದ ವಸ್ತುಗಳ ಪ್ರದರ್ಶನ ಮಾಡಲಾಗಿದೆ. ಈ ಪ್ರದೇಶದ ಅತ್ಯಂತ ಆಕರ್ಷಣೀಯ ಸ್ಠಳ ಮೃಗಾಲಯದಲ್ಲಿ ರೆಪ್ಟೈಲ್ ಪಾರ್ಕ್ ಹಾಗೂ ಒಂದು ಸಣ್ಣ ಥಿಯೇಟರ್ ಕೂಡಾ ಇದೆ. ಪ್ರದರ್ಶನದ ನಿರ್ವಹಣೆಯ ಬಗ್ಗೆ ಮೃಗಾಲಯವು ಆಗಾಗ್ಗೆ ವಿಮರ್ಶೆಗೊಳಗಾಗುತ್ತದೆ. ಪ್ರತಿ ಮಂಗಳವಾರದಂದು ಮೃಗಾಲಯವು ಮುಚ್ಚಿರುತ್ತದೆ (ವಾರದ ರಜೆ)

ಸಫಾರಿ[ಬದಲಾಯಿಸಿ]

ಮೃಗಾಲಯವು ವಾರದ ದಿನಗಳಲ್ಲಿ ಹಾಗೂ ವಾರದ ಕೊನೆಯ ದಿನಗಳಲ್ಲಿ (ರಜಾದಿನಗಳಲ್ಲಿ) ಬೇರೆ ಬೇರೆ ಪ್ರವೇಶ ಶುಲ್ಕವನ್ನು ಹೊಂದಿರುತ್ತದೆ ಈಗಿನಂತೆ ಪ್ರವೇಶ ಶುಲ್ಕಗಳು ಹೀಗಿವೆ ಗ್ರ್ಯಾಂಡ್ ಸಫಾರಿ— ಸಿಂಹಗಳು, ಹುಲಿಗಳು, ಕರಡಿಗಳು & ಇತರೆ ಸಸ್ಯಹಾರಿಗಳ ಪ್ರವೇಶ ಶುಲ್ಕ ವಾರದ ದಿನಗಳಲ್ಲಿ Rs. 100 ಮತ್ತು ವಾರದ ಕೊನೆಯ ದಿನಗಳಲ್ಲಿ (ಮತ್ತು ರಜಾದಿನಗಳಲ್ಲಿ) Rs. 135, ಪಾರ್ಕ್‌ನಲ್ಲಿ ತಿರುಗಾಡಲು ನಿಮಗೆ ಖರ್ಚಾಗುವೆ ವೆಚ್ಚ 35.00. ಹುಲಿ ಮತ್ತು ಸಿಂಹದ ಸಫಾರಿ, ಇದರಲ್ಲಿ ದೊಡ್ಡ ಗಾತ್ರದ ಬೆಕ್ಕುಗಳನ್ನುಮಾತ್ರ ತೋರಿಸಲಾಗುತ್ತದೆ, ಇದು ಆಸಕ್ತಿಯುಳ್ಳದ್ದಾಗಿದ್ದು ಇದರ ಪ್ರವೇಶ ಶುಲ್ಕವೂ ಕಡಿಮೆ ಇದ್ದು ಪ್ರವಾಸಿಗರು ಸುಲಭವಾಗಿ ತೆಗೆದುಕೊಳ್ಳಬಹುದಾಗಿದೆ (Rs.65 ಮತ್ತು 90 ವಾರದ ಕೊನೆಯ ದಿನಗಳು ಹಾಗೂ ರಜಾದಿನಗಳಲ್ಲಿ). ಕ್ಯಾಮೆರಾದ ಬಳಕೆ (ಸ್ಟಿಲ್ ಹಾಗೂ ವೀಡಿಯೋ)ಗಾಗಿ ಹೆಚ್ಚುವರಿ ಶುಲ್ಕಗಳು Rs.20 and Rs. 110.

ಮೇ ಪೂರ್ಣ ತಿಂಗಳಲ್ಲಿ ರಜಾದಿನಗಳ ಶುಲ್ಕವಿರುತ್ತದೆ, ಇಂಡಿಯಾದ ಮಕ್ಕಳಿಗೆ ಮೇ ತಿಂಗಳಿನಲ್ಲಿ ಬೇಸಿಗೆ ರಜೆ ಇರುತ್ತದೆ.

ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್‌ನ್ನು ಸಂಪರ್ಕಿಸಬೇಕಾದಲ್ಲಿ ಟೆಲಿಫೋನ್ ಸಂಖ್ಯೆ: +91-80-27828540

ಬಟರ್‌ಫ್ಲೈ ಪಾರ್ಕ್[ಬದಲಾಯಿಸಿ]

ದೇಶದ ಪ್ರಪ್ರಥಮ ಬಟರ್‌ಫ್ಲೈ ಪಾರ್ಕ್ ಬನ್ನೇರುಘಟ್ಟ ಬಯೋಲಾಜಿಕಲ್ ಪಾರ್ಕ್‌ನಲ್ಲಿ ಸ್ಥಾಪಿತಗೊಂಡಿತು. ಇದು 2006ರ ನವೆಂಬರ್ 25ರ ಶನಿವಾರದಂದು ವಿಜ್ಞಾನ ಮತ್ತು ತಂತ್ರಜ್ಞಾನದ ಯೂನಿಯನ್ ಮಿನಿಸ್ಟರ್ ಕಪಿಲ್ ಸಾಬಿಲ್ ಅವರಿಂದ ಉದ್ಘಾಟನೆಯಾಯಿತು.

ಬಟರ್‌ಫ್ಲೈ ಪಾರ್ಕ್ ಆ ಪ್ರದೇಶದ ಸುತ್ತೆಲ್ಲ ಹರಡಿಕೊಂಡಿದೆ7.5 acres (30,000 m2) . ಇದರಲ್ಲಿ ಬಟರ್‌ಫ್ಲೈಗಳ ಸಂರಕ್ಷಣಾ ಸ್ಥಳ, ವಸ್ತು ಸಂಗ್ರಹಾಲಯ ಮತ್ತು ಒಂದು ಆಡಿಯೋ-ವಿಶುಯಲ್ ಕೋಣೆಯೂ ಸಹ ಇವೆ. ಬಟರ್‌ಫ್ಲೈ ಸಂರಕ್ಷಣೆ ಮಾಡುವ ಸ್ಥಳವು ಒಂದು ಪಾಲಿಕಾರ್ಬೊನೇಟ್ ಮೇಲ್ಛಾವಣಿಯನ್ನು ಹೊಂದಿದೆ ಮತ್ತು 10,000 sq ft (1,000 m²) ವಿಸ್ತಾರವಾಗಿದೆ. ಗೋಳಾಕೃತಿಯ ಸುತ್ತುವರಿಕೆ ಇದ್ದು, ಒಳಭಾಗದಲ್ಲಿ ಸುಮಾರು 20 ತಳಿಗಳ ಬಟರ್‌ಫ್ಲೈಗಳು ವಾಸಿಸಲು ಬೇಕಾದ ವಾತಾವರಣವನ್ನು ಅತ್ಯಂತ ಎಚ್ಚರಿಕೆಯಿಂದ ವಿನ್ಯಾಸಗೊಳಿಸಿದ್ದಾರೆ

ಈ ವಾತಾವರಣವು ಉಷ್ಣತೆಯ ಮಟ್ಟ ಸಮಾನವಾಗಿರುವಂತೆ - ಪೂರ್ಣ ಒದ್ದೆಯಾದ ವಾತಾವರಣ, ಒಂದು ಕೃತಕ ಝರಿ, ಒಂದು ಕಿರಿದಾದ ನಡೆದಾಡುವ ಸೇತುವೆ ಮತ್ತು ಬಟರ್‌ಫ್ಲೈಗಳು ಆಕರ್ಷಿತವಾಗುವಂತೆ ತಿನ್ನಲು ಯೋಗ್ಯವಾದ ಸಸ್ಯಗಳು ಮತ್ತು ಪೊದರುಗಳುಗಳನ್ನು ಸಹ ಅಲ್ಲಿ ಸೃಷ್ಟಿಸಿದ್ದಾರೆ.

ಈ ಸಂರಕ್ಷಣಾ ಸ್ಥಳವು ಎರಡನೆ ಮತ್ತು ಮೂರನೆಯ ಮನೆಗಳಿಗೆ ಕರೆದೊಯ್ಯುತ್ತದೆ, ಅದು ಚಿಕ್ಕ ಥಿಯೇಟರ್ ಇರುವ ವಸ್ತುಸಂಗ್ರಹಾಲಯವನ್ನು ಹೊಂದಿದೆ ಮತ್ತು ಅತ್ಯಂತ ಎಚ್ಚರಿಕೆಯಿಂದ ಸಂರಕ್ಷಿಸಿದ, ಸೊಗಸಾದ ಬಟರ್‌ಫ್ಲೈಗಳನ್ನು ಪ್ರದರ್ಸಿಸಲಾಗುತ್ತದೆ.

ಇಲ್ಲಿ ಜೊತೆಗೂಡಿದ ಏಜೆನ್ಸಿಗಳೆಂದರೆ ಝೂ ಅಥಾರಿಟಿ ಆಫ್ ಕರ್ನಾಟಕ, ಯೂನಿವರ್ಸಿಟಿ ಆಫ್ ಅಗ್ರಿಕಲ್ಚರಲ್ ಸೈನ್ಸಸ್ ಮತ್ತು ಅಶೋಕ ಟ್ರಸ್ಟ್ ಫಾರ್ ರೀಸರ್ಚ್ ಇನ್ ಎಕಾಲಜಿ ಅಂಡ್ ಎನ್ವಿರಾನ್‌ಮೆಂಟ್ (ATREE).

ಬಯೋಲಾಜಿಕಲ್ ರಿಸರ್ವ್[ಬದಲಾಯಿಸಿ]

ಪಾರ್ಕ್‌ನ ಸುತ್ತಮುತ್ತಲಿನ ಬಯೋಲಾಜಿಕಲ್ ರಿಸರ್ವ್ ಪ್ರದೇಶವು ಫಾರೆಸ್ಟ್ ಡಿಪಾರ್ಟ್‌ಮೆಂಟ್‌ಗೆ ಸೇರುತ್ತದೆ. ಮತ್ತು ಇದು ಆನೆಗಳು, ಹಲ್ಲಿಗಳು, ಜಿಂಕೆಗಳು ಮತ್ತು ಇತರೆ ವೈವಿಧ್ಯಮಯ ಪ್ರಾಣಿಗಳ ವಾಸಸ್ಥಾನವಾಗಿದೆ


ಈ ರಿಸರ್ವ್ ಆನೆಗಳ ಕಾರಿಡಾರ್‌ಗೆ ಸೇರುತ್ತದೆ ಮತ್ತು ಸತ್ಯಮಂಗಲಂ ಕಾಡಿನ ಬಿ.ಆರ್.ಹಿಲ್ಸ್‌ಗೆ ವೇನಾಡಿನ ಮೂಲಕವಾಗಿ ಸಂಪರ್ಕವನ್ನು ಕಲ್ಪಿಸುತ್ತದೆ

ವಿಶೇಷ ಸಂದರ್ಭಗಳ ವರದಿಯಂತೆ ಬಯೋಲಾಜಿಕರ್ ರಿಸರ್ವ್‌ನ ಸುತ್ತಮುತ್ತ ಪ್ರಯಾಣಮಾಡುವಾಗ ಆನೆಗಳು ಬನ್ನೇರುಘಟ್ಟ- ಆನೆಕಲ್ ದಾರಿಯಲ್ಲಿ ಓಡಾಡುತ್ತಿರುತ್ತವೆ. ಒಂದು ಶಾಲೆ 3 ದಿನಗಳವರೆಗೆ ರಜೆ ಇದ್ದು ಬಾಗಿಲು ಮುಚ್ಚಿರುವಾಗ ಒಂದು ಚಿರತೆಯು ತನ್ನ ಮರಿಗಳ ಜೊತೆಯಲ್ಲಿ ಓಡಾಡಿಕೊಂಡಿತ್ತು ಎಂಬ ವರದಿ ಪ್ರಕಟವಾಗಿತ್ತು.http://bangalorebuzz.blogspot.com/2007/09/leopards-on-prowl-on-bannerghatta-main.html

ಬಾಹ್ಯ ಕೊಂಡಿಗಳು ಮತ್ತು ಆಕರಗಳು[ಬದಲಾಯಿಸಿ]

ಬನ್ನೇರುಘಟ್ಟ ಮೃಗಾಲಯದಲ್ಲಿನ ಒಂದು ಚಿರತೆ
ಬನ್ನೇರುಘಟ್ಟ ಮೃಗಾಲಯದಲ್ಲಿರುವ ಮೊಸಳೆಗಳು
ಅರ್ಥವಿವರಣೆಯ ಕೇಂದ್ರ @ ಬಟರ್‌ಫ್ಲೈ ಪಾರ್ಕ್
ಇಡಿಯೊಪಿಡೆ ಕುಟುಂಬದ ಒಂದು ವಿರಳ ಜೇಡವು ಬನ್ನೇರುಘಟ್ಟದಲ್ಲಿ ಪತ್ತೆಯಾಗಿದೆ.

0 thoughts on “Essay On Park In Kannada

Leave a Reply

Your email address will not be published. Required fields are marked *